
ಸಿಡ್ನಿ ಹೇಳ್ತಾರೆ: “ನಾವು ಮರೆಯಲಾಗದ, ಖಾಸಗಿ ಸುವಾಸನೆಯೊಂದನ್ನು ಸೃಷ್ಟಿಸಿದ್ದೇವೆ.” ಈ ಎಕ್ಸ್‌ಫೋಲಿಯೇಟಿಂಗ್ ಬಾರ್ ಅನ್ನು ಮರಳು, ಪೈನ್ ತೊಗಟೆ ಸಾರ ಮತ್ತು ಸಿಡ್ನಿ ಸ್ನಾನದ ನೀರಿನಿಂದ ತಯಾರಿಸಲಾಯಿತಂತೆ.
“ಜಾಹೀರಾತಿನ ನಂತರ ನನ್ನ ಸ್ನಾನದ ನೀರಿನ ಬಗ್ಗೆ ನೀವು ಕೇಳುತ್ತಲೇ ಇದ್ದಿರಿ, ಹೀಗಾಗಿ ನಾವು ಅದನ್ನು ಉಳಿಸಿಕೊಂಡೆವು” ಎಂದು ನಟಿ Instagram ನಲ್ಲಿ ಹೇಳಿದರು. “ಇದು ಸಿಡ್ನಿಯ ಬಾತ್‌ವಾಟರ್ ಬ್ಲಿಸ್! ನನ್ನ ನಿಜವಾದ ಸ್ನಾನದ ನೀರಿನಿಂದ ತಯಾರಿಸಿದ ಅತ್ಯಂತ ನಿಜವಾದ ಮತ್ತು ಅತ್ಯಂತ ಸೀಮಿತ ಆವೃತ್ತಿಯ ಸೋಪ್,” ಎಂದು ಅವರು ಹೇಳಿದರು.
ಸಿಡ್ನಿ ಸ್ವೀನಿ ಯುಫೋರಿಯಾ ಸೀಸನ್ 3 ಬಗ್ಗೆ ಲೇವಡಿ ಮಾಡುತ್ತಾ, “ಕ್ಯಾಸಿ ಈ ಬಾರಿ ಇನ್ನಷ್ಟು ‘ಅನ್ಹಿಂಗ್ಡ್’ ಆಗಿರ್ತಾಳೆ” ಎಂದಿದ್ದಾರೆ. ಎಂಪೈರ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ, “ಈ ಸೀಸನ್‌ನಲ್ಲಿ ನಾನು ವಿಭಿನ್ನ ರೀತಿಯಲ್ಲಿ, ವಿಶೇಷವಾಗಿ ಕಾಣಿಸುತ್ತೇನೆ” ಎಂದು ತಿಳಿಸಿದ್ದಾರೆ.
“ಆ ಪಾತ್ರ ಹಲವು ತಪ್ಪುಗಳನ್ನು ಮಾಡುತ್ತಾಳೆ, ಬಹುಹಂತಗಳಲ್ಲಿ ದೋಷಪೂರಿತಳಾಗಿದ್ದಾಳೆ. ಆದರೆ ಅವಳು ಎಲ್ಲವನ್ನೂ ಪ್ರೀತಿಯಿಂದ ಮಾಡುತ್ತಾಳೆ. ಬಹುಷಃ ಇದು ಪ್ರೀತಿಯ ದುಃಖಭರಿತ ಆವೃತ್ತಿಯೇ ಆಗಿರಬಹುದು” ಎಂದು ಸಿಡ್ನಿ ಸ್ವೀನಿ ಹೇಳಿದ್ದಾರೆ.